*ಚಂದ್ರಕಾಂತ ಬಾಬುರಾವ್ ಪಡ್ನಾಡ್ ಶಾಲೆಯಲ್ಲಿ ಬಿಳ್ಕೋಡುಗೆ ಹಾಗೂ ಪ್ರತಿಭಾ ಪುರಸ್ಕಾರ ವಾರ್ಷಿಕ ಸ್ನೇಹ ಸಮ್ಮೇಳನ* *ಸಂಕೊನಟ್ಟಿ ಶಾಲೆಯಲ್ಲಿ 7 ನೇ ವರ್ಗ ಸೇರ...
*ಚಂದ್ರಕಾಂತ ಬಾಬುರಾವ್ ಪಡ್ನಾಡ್ ಶಾಲೆಯಲ್ಲಿ ಬಿಳ್ಕೋಡುಗೆ ಹಾಗೂ ಪ್ರತಿಭಾ ಪುರಸ್ಕಾರ ವಾರ್ಷಿಕ ಸ್ನೇಹ ಸಮ್ಮೇಳನ*
*ಸಂಕೊನಟ್ಟಿ ಶಾಲೆಯಲ್ಲಿ 7 ನೇ ವರ್ಗ ಸೇರಿದಂತೆ SSLC ಹಾಗೂ PUC ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ*
ಹೌದು. ಶಾಲಾ ಆವರಣಕ್ಕೆ ಬರುತ್ತಿದ್ದಂತೆ ನಮಗೆ ಮೊದಲು ಕಣ್ಣಿಗೆ ಕಾಣುವ ವೇದವಾಕ್ಯ
*ವಿದ್ಯಾ ವಿನಯೇನ ಶೋಭಿತೆ..* -ನಮ್ಮನ್ನು ನಾವು ಸುಮ್ಮನೇ ದೊಡ್ಡವರೆಂದು ಭಾವಿಸುವುದರಿಂದ ನಮಗೆ ಹಾನಿಯೇ ವಿನಃ ಅನ್ಯರಿಗಲ್ಲ . ನಾನೇ ದೊಡ್ಡವ, ನಾನೇ ಜ್ಞಾನಿ ಎಂದುಕೊಳ್ಳುವುದರಿಂದ ನಾನು ಮತ್ತಷ್ಟೂ ಸಣ್ಣವನಾಗುತ್ತೇನೆ, ಅಜ್ಞಾನಿಯಾಗುತ್ತೇನೆ. ನಾವು ಇರುವುದೇ ಬೇರೆ, ಜಗಕೆ ತೋರುವುದೇ ಬೇರೆ. ನಾವು ತೋರುವುದನ್ನು ಬಿಟ್ಟು ನಮ್ಮ ಇರುವಿಕೆಯನ್ನು ನಾವು ಅರಿಯಬೇಕು. ಆಗ ನಮ್ಮಲ್ಲಿ ನಾತಿಮಾನಿತಾ ಅಳವಡುತ್ತದೆ.
ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಸಂಸ್ಕಾರದ ಪಠ್ಯದ ಜತೆಗೆ ಸ್ಪರ್ಧಾತ್ಮಕ ವಿಷಯಾಧಾರಿತ ಶಿಕ್ಷಣ ನೀಡಿದಾಗ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಮೂಡಲು ಸಾಧ್ಯ.ಪ್ರತಿ ವರ್ಷದಂತೆ ಈ ವರ್ಷವೂ 2024ನೇ ಸಾಲಿನ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ವರ್ಧಮಾನ್ ಶಿಕ್ಷಣ ಸಂಸ್ಥೆಯ ಪಡ್ನಾಡ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಆಯೋಜಿಸಲಾಗಿತ್ತು,
ಈ ಸ್ನೇಹ ಸಮ್ಮೇಳನ ವೇದಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಶೈಕ್ಷಣಿಕ, ಕ್ರೀಡೆ ಹಾಗೂ ಸಹಪಠ್ಯ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.
ಇನ್ನು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸುಭಾಷ್ ಮುನ್ನೋಳ್ಳಿ, ವರ್ಧಮಾನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಶ್ರೀ. ಶ್ರಿಕಾಂತ ಅಸ್ಕಿ, ಉದ್ಘಾಟಕರಾಗಿ ಸುರೇಶ್ ಪಡ್ನಾಡ್, ನ್ಯಾಯವಾದಿ ಚಂದ್ರಕಾಂತ ಪಡ್ನಾಡ್, ಬಾಳಾಸಾಹೇಬ ಲೋಕಾಪುರ್ , ಶ್ರೀಕಾಂತ್ ಅಸ್ಕಿ ಹಾಗೂ ಹೆಚ್ಎಂ ಲಡ್ಗಿ ಸರ್ ಯೆಲಿಗೌಡರ್ ಸರ್ ಅನಂತ್ ಸರ್ ಮೇತ್ರಿ ಸರ್, ಎಬಿ ಪಾಟೀಲ್ ಸರ್ ಸೇರಿದಂತೆ ಗಣ್ಯರು,ಶಿಕ್ಷಕರು ಹಾಗೂ ಮುದ್ದು ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಮೆರುಗು ತಂದರು.
ವರದಿ: ಅಲ್ಲಾವುದ್ದೀನ್ ಶೇಖ ನ್ಯೂಸ್ ಪ್ರೈಮ್ ಚಿಕ್ಕೋಡಿ