ಅಥಣಿ: ಸ್ಥಳೀಯ ಶ್ರೀ ಶಿವಯೋಗಿ ಮುರುಗೇಂದ್ರ ಸ್ವಾಮೀಜಿ ಬಿಸಿಎ ಮಹಾವಿದ್ಯಾಲಯದಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಬಿಸಿಎ ವಿಭ...
ಅಥಣಿ: ಸ್ಥಳೀಯ ಶ್ರೀ ಶಿವಯೋಗಿ ಮುರುಗೇಂದ್ರ ಸ್ವಾಮೀಜಿ ಬಿಸಿಎ ಮಹಾವಿದ್ಯಾಲಯದಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಬಿಸಿಎ ವಿಭಾಗದ ಉಪನ್ಯಾಸಕರಾದ ಪ್ರೊಫೆಸರ .ಧರ್ಮರಾಜ ಕುಂಬಾರ ಅವರು, ಇನ್ನಿಬ್ಬರು ಪ್ರಾಧ್ಯಾಪಕರ ಜೊತೆಗೆ ಬರೆದಂತಹ “ಫಂಡಮೆಂಟಲ್ಸ್ ಆಫ್ ಕಂಪ್ಯೂಟರ್ “ ಪುಸ್ತಕ ನಿನ್ನೆ ದಿವಸ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಪ್ರಾಚಾರ್ಯರಾದ ಪ್ರೊಫೆಸರ. ಪರಮಾನಂದ ನಾಯಕ ಅವರು ಮಾತನಾಡಿ ಪ್ರತಿಯೊಬ್ಬ ಶಿಕ್ಷಕರು ಬರೆಯುವ ಹವ್ಯಾಸವನ್ನು ಹೊಂದಬೇಕು ಎಂದು ಹೇಳಿದರು.
ಬರೆಯುವ ಹವ್ಯಾಸವು ಶಿಕ್ಷಕರಲ್ಲಿ ಜ್ಞಾನವನ್ನು ಅಭಿವೃದ್ಧಿಪಡಿಸುವುದು ಮಾತ್ರವಲ್ಲದೆ,ಅವರ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಸ್ಥಳೀಯ ಶ್ರೀ ಶಿವಯೋಗಿ ಮುರುಗೇಂದ್ರ ಸ್ವಾಮೀಜಿ ಪದವಿ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾದ ಪ್ರೊಫೆಸರ್. ಕೆ ಎಸ್ ಪಾಟೀಲ್ ಅವರು ವಹಿಸಿಕೊಂಡು ಮಾತನಾಡಿ ಬರೆಯುವುದು ಒಂದು ಕಲೆ, ಇವತ್ತಿನ ಆಧುನಿಕ ಜಗತ್ತಿನಲ್ಲಿ ಹಲವಾರು ತಂತ್ರಾಂಶಗಳು ಲೇಖಕರಿಗೆ ಲಭ್ಯವಿದ್ದು. ಅವುಗಳನ್ನು ಬಳಸಿಕೊಂಡು ಪುಸ್ತಕವನ್ನುಬರೆಯಬೇಕು ಎಂದರು.
ಈ ಸಂದರ್ಭದಲ್ಲಿ ಬಿಸಿಎ ವಿಭಾಗದ ಶೈಕ್ಷಣಿಕ ಸಂಯೋಜಕರಾದ ಪ್ರೊಫೆಸರ್ ಸತೀಶ್ ಮಲಾಯಿ, ಪ್ರೊಫೆಸರ್ .ಧರ್ಮರಾಜ ಕುಂಬಾರ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು ಮತ್ತು ಉಪನ್ಯಾಸಕರಾದ ಶಿಲ್ಪಾ ಗದಗ, ಅಜಯ್ ಅಕ್ಕಿವಾಟೆ, ಕವಿತಾ , ಪ್ರತೀಕ್ಷಾ ಸುರಪುರ, ಅಕ್ಷಯ ಭಾಸಿಂಗೆ ,ಮಹಾಂತೇಶ ಅಜೂರ ಬಿಸಿಎ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರ. ಈ ಸಮಾರಂಭದ ನಿರೂಪಣೆಯನ್ನು ಪ್ರೊಫೆಸರ ಪ್ರತೀಕ್ಷಾ ಸುರಪುರ ಅವರು ನಡೆಸಿಕೊಟ್ಟರು .ವಂದನಾರ್ಪಣೆಯನ್ನು ಪ್ರೊಫೆಸರ ಕವಿತಾ ಅವರು ನಡೆಸಿಕೊಟ್ಟರು.