ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ಭೂಮಿ ಪೂಜೆ ಮಾಡಿದ ಶಾಸಕ ಸಿದ್ದು ಸವದಿ.. ಬಾಗಲಕೋಟ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಾ ಮಹಾಲಿಂಗಪುರ ಪಟ್ಟಣದಲ್ಲಿ ಇಂ...
ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ಭೂಮಿ ಪೂಜೆ ಮಾಡಿದ ಶಾಸಕ ಸಿದ್ದು ಸವದಿ..
ಬಾಗಲಕೋಟ ಜಿಲ್ಲೆ
ರಬಕವಿ ಬನಹಟ್ಟಿ ತಾಲೂಕಾ
ಮಹಾಲಿಂಗಪುರ ಪಟ್ಟಣದಲ್ಲಿ
ಇಂದು ಶಾಸಕರಾದ ಸಿದ್ದು ಸವದಿ ಅವರ ತೇರದಾಳ ಮತಕ್ಷೇತ್ರದ ಮಹಾಲಿಂಗಪುರ ನಗರದಲ್ಲಿ ಕ್ರಾಂತಿಕಾರಿ ಬ್ರಿಟಿಷರಿಗೆ ನಡುಕ ಹುಟ್ಟಿಸಿದ ವೀರರಾಣಿ ಕಿತ್ತೂರು ಚೆನ್ನಮ್ಮನ ಸರ್ಕಲ್ ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನೆರವೇರಿತು..
ಮಹಾಲಿಂಪುರದ ಜನತೆಯ ಬಹುದಿನಗಳ ಬೇಡಿಕೆ ಆಗಿದ್ದ ಕಿತ್ತೂರ ರಾಣಿ ಚನ್ನಮ್ಮ ಸರ್ಕಲ್ ಮಾಡಬೇಕೆಂಬ ಆಸೆ ಇಂದು ಇಡೇರಿತು..
ಬೆಳಕಿನ ಹಬ್ಬ ದೀಪಾವಳಿಯಲ್ಲಿ ನಗರದ ಜನತೆ ಹಬ್ಬವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಹಿಂತಹ ಶ್ರೇಷ್ಠ ಮಹಿಳಾ ಕ್ರಾಂತಿಕಾರಿಯ ಸರ್ಕಲ್ ಭೂಮಿ ಪೂಜಾ ನೆರವೇರಿತು
ಈ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಶಂಕರ ಅಂಗಡಿ, ಮಹಾಂತೇಶ ಹಿಟ್ಟಿನಮಠ, ಬಸನಗೌಡ ಪಾಟೀಲ, ದರೆಪ್ಪ ಉಳ್ಳಾಗಡ್ಡಿ, ಡಾ "ಎ ಆರ್ ಬೆಳಗಲಿ,ಶೇಖರ್ ಅಂಗಡಿ, ಹಾಗೂ ಎಲ್ಲ ಪುರಸಭೆ ಸದಸ್ಯರು ಕಾರ್ಯಕರ್ತರು ಈ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು..
ವರದಿ : ಈಶ್ವರ ಯಳಸಂಗ ಪ್ರೈಮ್ ನ್ಯೂಸ್ ಭಾಗಲಕೋಟ