ಕಾಗವಾಡ: ಗಡಿ ಭಾಗದಲ್ಲಿ ಹೆಚ್ಚುತ್ತಿರುವ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾಗವಾಡದ ನೂತನ ಮಹಿಳಾ ಪಿಎಸ್‌ಐ ಗಂಗಾ ಅವರು ಫೀಲ್ಡ್ ಗಿಳಿದಿದ್ದು,ಕಳ್ಳರ ಹೆ...
ಕಾಗವಾಡ: ಗಡಿ ಭಾಗದಲ್ಲಿ ಹೆಚ್ಚುತ್ತಿರುವ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾಗವಾಡದ ನೂತನ ಮಹಿಳಾ ಪಿಎಸ್‌ಐ ಗಂಗಾ ಅವರು ಫೀಲ್ಡ್ ಗಿಳಿದಿದ್ದು,ಕಳ್ಳರ ಹೆಡೆಮುರಿ ಕಟ್ಟಲು ಸಿದ್ಧತೆ ನಡೆಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು ಅದನ್ನು ತಡೆಗಟ್ಟಲು ಕಳ್ಳರ ಬಗ್ಗೆ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಲು ಪಿಎಸ್‌ಐ ಗಂಗಾ ಬಿರಾದಾರ ಸ್ವತಃ ರಸ್ತೆಗಿಳಿದು ಸಾರ್ವಜನಿಕರ ಸ್ಥಳಗಳಿಗೆ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಪಿಎಸ್‌ಐ ಗಂಗಾ ಬಿರಾದಾರ ಅವರ ಸಮಾಜಮುಖಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಂದು ಹೇಳಬಹುದು..
ವರದಿ: ಅಲ್ಲಾವುದ್ದೀನ್ ಶೇಖ
ನ್ಯೂಸ್ ಪ್ರೈಮ್ ಚಿಕ್ಕೋಡಿ