ಶಾಂತಿ ಹಾಗೂ ಸೌಹಾರ್ದಯುತವಾಗಿ ಗಣೇಶ್ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬವನ್ನು ಆಚರಿಸಿ ..ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ ಗಣೇಶ ಚತುರ್ಥಿ ಹಾಗೂ ಇಸ್ಲ...
ಶಾಂತಿ ಹಾಗೂ ಸೌಹಾರ್ದಯುತವಾಗಿ ಗಣೇಶ್ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬವನ್ನು ಆಚರಿಸಿ ..ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ
ಗಣೇಶ ಚತುರ್ಥಿ ಹಾಗೂ ಇಸ್ಲಾಂ ಧರ್ಮದ ಪವಿತ್ರ ಹಬ್ಬ ಈದ್ ಮಿಲಾದ್ ಪ್ರಯುಕ್ತ ಅಥಣಿ ಉಪವಿಭಾಗ ಅಥಣಿ ಪೊಲೀಸ್ ಠಾಣೆಯಿಂದ ಶಾಂತಿ ಸಭೆ
ಅಥಣಿ ಪೊಲೀಸ್ ಭವನದಲ್ಲಿ ಗಣೇಶ ಚತುರ್ಥಿ ಹಾಗೂ ಇಸ್ಲಾಂ ಧರ್ಮದ ಪವಿತ್ರ ಹಬ್ಬವಾದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಪಾಲನಾ ಸಭೆಯನ್ನು ಅಥಣಿ ಪಟ್ಟಣದ ಪೊಲೀಸ್ ಭವನದಲ್ಲಿ ರವಿವಾರ ದಿನಾಂಕ ಸೆಪ್ಟೆಂಬರ್ 01 ರಂದು ಹಮ್ಮಿಕೊಳ್ಳಲಾಯಿತು.
ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬ ಆಚರಣೆಗಾಗಿ ಅಧಿಕಾರಿಗಳಿಂದ ನಿಯಮಗಳನ್ನು ಅಚ್ಚುಕಟ್ಟಾಗಿ ಕಟ್ಟುನಿಟ್ಟಾಗಿ ಸಾರ್ವಜನಿಕರಿಗೆ ತಿಳಿಸಿ ಮನವರಿಕೆಮಾಡಲಾಯಿತು.
ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಶಾಂತಿ ಸಭೆಯನ್ನು ಅಥಣಿ ಪೊಲೀಸ್ ಸಭಾಭವನದ ಅವರಣದಲ್ಲಿ ಆಯೋಜಿಸಲಾಗಿತ್ತು. ಸಭೆಯಲ್ಲಿ ಹಬ್ಬಗಳನ್ನು ಶಾಂತಿಯುತವಾಗಿ, ಸಮುದಾಯದ ಎಲ್ಲಾ ಸದಸ್ಯರು ಸಹಭಾಗಿಯಾಗಿ ಆಚರಿಸುವ ಮಹತ್ವವನ್ನು ಎಲ್ಲಾ ನಾಯಕರು ಪ್ರಸ್ತಾಪಿಸಿದರು.
ಹಬ್ಬದ ಸಂದರ್ಭದಲ್ಲಿ ಯಾವುದೇ ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಉಂಟಾಗದಂತೆ ಸಮುದಾಯದ ಜನರು ಪರಸ್ಪರ ಸಹಕಾರ ಮತ್ತು ಸಹಾನುಭೂತಿಯೊಂದಿಗೆ ನಡೆದುಕೊಳ್ಳಬೇಕು’ ಪೊಲೀಸ್ ಇಲಾಖೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ನಿಮ್ಮ ಸಹಕಾರ ನಮ್ಮ ಇಲಾಖೆಗೆ ಇರಲಿ ಎಲ್ಲರೂ ಶಾಂತಿಯುತವಾಗಿ ಗಣೇಶ್ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬವನ್ನು ಆಚರಿಸುವಂತೆ ಕರೆನೀಡಿದರು.
ಇನ್ನು ಈ ಶಾಂತಿ ಪಾಲನಾ ಸಭೆಯಲ್ಲಿ ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ ತಾಲೂಕು ದಂಡಾಧಿಕಾರಿಗಳು, ಸಿಪಿಐ ರವಿಂದ್ರ ನಾಯ್ಕೋಡಿ, ಪಿಎಸ್ಐ ಶಿವಾನಂದ ಕಾರಜೋಳ, ಹೆಸ್ಕಾಂ ಅಧಿಕಾರಿಗಳು, ಅಗ್ನಿಶಾಮಕ ಅಧಿಕಾರಿಗಳು, ಹಾಗೂ ಎಲ್ಲ ಸಮಾಜದ ಮುಖಂಡರು ಎಲ್ಲ ಗಣೇಶ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ವರದಿ: ಅಲ್ಲಾವುದ್ದೀನ್ ಶೇಖ
ನ್ಯೂಸ್ ಪ್ರೈಮ್ ಚಿಕ್ಕೋಡಿ