ಬೆಳಗಾವಿ : ಕಾಂಗ್ರೆಸ್ ಮುಖಂಡರೊಬ್ಬರನ್ನು ನಡುರಸ್ತೆಯಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ಶಾಸಕ ಲಕ್ಷ್ಮಣ ಸವದಿಯವರ ಆಪ್ತ, ಸ್ಥಳೀಯ ಕಾಂಗ್ರೆಸ್ ಮುಖಂಡ ಅಣ...
ಬೆಳಗಾವಿ : ಕಾಂಗ್ರೆಸ್ ಮುಖಂಡರೊಬ್ಬರನ್ನು ನಡುರಸ್ತೆಯಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ಶಾಸಕ ಲಕ್ಷ್ಮಣ ಸವದಿಯವರ ಆಪ್ತ, ಸ್ಥಳೀಯ ಕಾಂಗ್ರೆಸ್ ಮುಖಂಡ ಅಣ್ಣಪ್ಪ ಬಸಣ್ಣ ನಿಂಬಾಳ (58) ಹತ್ಯೆಗೀಡಾಗಿದ್ದಾರೆ.
ಅಥಣಿ ತಾಲೂಕಿನ ಖೀಳೆಗಾಂವನಲ್ಲಿ ಅಣ್ಣಪ್ಪ ಬಸಣ್ಣನಿಂಬಾಳ ಅವರ ಮೇಲೆ ಆರು ದುಷ್ಕರ್ಮಿಗಳು ದಾಳಿನಡೆಸಿದ್ದಾರೆ. ಇವರ ಮೇಲೆ ಮಾರಕಾಸ್ತ್ರಗಳಿಂದ ಹಠಾತ್ತನೆದಾಳಿ ನಡೆಸಿದ ಕಾರಣ ಅಣ್ಣಪ್ಪ ಬಸಣ್ಣ ನಿಂಬಾಳನಿರುತ್ತರರಾಗಿದ್ದಾರೆ. ಮಾರಣಾಂತಿಕ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಖಿಳೆಗಾಂವ ಗ್ರಾಮಕ್ಕೆ ಪೊಲೀಸರುಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಅಣ್ಣಪ್ಪ ಬಸಣ್ಣ ನಿಂಬಾಳ ಅವರು ಖಿಳೇಗಾಂವ ಗ್ರಾಮದಕೃಷಿ ಪತ್ತಿನ ಸಂಘ ಸಹಕಾರಿ ಅಧ್ಯಕ್ಷರಾಗಿದ್ದರು. ಶಾಸಕಲಕ್ಷ್ಮಣ ಸವದಿ ಅವರ ಆಪ್ತರಾಗಿದ್ದಾರೆ. ಸ್ಥಳೀಯವಾಗಿ ಪಕ್ಷಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಲೋಕಸಭೆ ಚುನಾವಣೆಹಿನ್ನೆಲೆಯಲ್ಲಿಯೂ ಇವರು ಹೆಚ್ಚು ಸಕ್ರಿಯರಾಗಿಕಾರ್ಯನಿರ್ವಹಿಸುತ್ತಿದ್ದರು. ಆದರೆ, ರಾಜಕೀಯದ್ವೇಷದಿಂದಾಗಿ ಇವರನ್ನು ಹತ್ಯೆ ಮಾಡಲಾಗಿದೆ ಎಂದುಗ್ರಾಮದ ಮೂಲಗಳು ತಿಳಿಸಿವೆ.
ಬುಧವಾರ ಸಂಜೆದೇವಸ್ಥಾನಕ್ಕೆ ಹೋಗಿಮರಳುತ್ತಿದ್ದವೇಳೆ ಆರುಮಂದಿ ಮುಸುಕುಧಾರಿಗಳ ಗುಂಪು ಅವರ ಮೇಲೆ ದಾಳಿಮಾಡಿದೆ. ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದೆ.ರಕ್ತದಮಡುವಿನಲ್ಲಿ ಬಿದ್ದಿದ್ದ ಅವರನ್ನು ಅಥಣಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ. ಅವರು ಶಾಸಕರಾದ ಲಕ್ಷ್ಮಣಸವದಿ, ರಾಜುಕಾಗೆ ಅವರ ಆಪ್ತರು.ಕೊಲೆವಿಷಯತಿಳಿದು ಶಾಸಕಸವದಿ ಆಸ್ಪತ್ರೆಗೆ ಭೇಟಿನೀಡಿದರು.ಕೊಲೆಗೆ ನಿಖರಕಾರಣಗೊತ್ತಾಗಿಲ್ಲ ಎಂದು ಅಥಣಿ ಪೊಲೀಸರು ತಿಳಿಸಿದ್ದಾರೆ.ಗ್ರಾಮದಲ್ಲಿ ಆತಂಕದ ವಾತಾವರಣ ಮನೆಮಾಡಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.