ಖಾನಾಪುರ : ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ದುರದುಂಡೇಶ್ವರ ಮಹಾದೇವ ಬನ್ನೂರ ಲೋಕಾಯುಕ್ತರ ಬಲೆಗೆ ... ಹೌದು: ಫಿರ್ಯಾದಿದಾರರಾದ ಶ್ರೀ ವಿನ...
ಖಾನಾಪುರ :
ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ದುರದುಂಡೇಶ್ವರ ಮಹಾದೇವ ಬನ್ನೂರ ಲೋಕಾಯುಕ್ತರ ಬಲೆಗೆ ...
ಹೌದು:
ಫಿರ್ಯಾದಿದಾರರಾದ ಶ್ರೀ ವಿನಾಯಕ ಮಲ್ಲಪ್ಪ ಮುತಗೇಕರ ಸಾ|| ಕಾಂಜಳೆ, ತಾ|| ಖಾನಾಪೂರ ಇವರು ಸದಸ್ಯನಾಗಿರುವ ನೀಲಾವಡೆ ಗ್ರಾಮ ಪಂಚಾಯತಿಯ 2ನೇ ವಾರ್ಡನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ನರೇಗಾ ಮಂಜೂರಾದ ತಾಂತ್ರಿಕ ಅನುಮೋದನೆ ಮಂಜೂರಾತಿ ಪಡೆಯುವ ಕುರಿತು ನೀಲಾವಡೆ ಗ್ರಾಮ ಪಂಚಾಯತಿಯಿಂದ ಪಂಚಾಯತ ರಾಜ್ ಇಂಜೀನಿಯರಿಂಗ ಉಪವಿಭಾಗ, ಖಾನಾಪೂರ ಕಛೇರಿಗೆ ಆನಲೈನ್ ಮುಖಾಂತರ ಕಳುಹಿಸಲಾಗಿತ್ತು.
ಸದರಿ ಕಾಮಗಾರಿಗಳಿಗೆ ತಾಂತ್ರಿಕ ಅನುಮೋದನೆ ನೀಡಲು ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ದುರದುಂಡೇಶ್ವರ ಮಹಾದೇವ ಬನ್ನೂರ ರವರು ಪಿರಾದಿ ಶ್ರೀವಿನಾಯಕ ಮಲ್ಲಪ್ಪ ಮುತಗೇಕರ ರವರಿಗೆ ರೂ 10,000/- ಲಂಚದ ಹಣಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿಈ ಬಗ್ಗೆ ಲಂಚ ಕೊಡಲು ಮನಸ್ಸಿಲ್ಲದೇ ಪಿರಾದಿದಾರರು ಆಪಾದಿತ ಅಧಿಕಾರಿಯ ಲಂಚ ಬೇಡಿಕೆಯ ಬಗ್ಗೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್ಠಾಣೆ ಬೆಳಗಾವಿಯಲ್ಲಿ ಪ್ರಕರಣ ಸಂಖ್ಯೆ 05/2024 ಕಲಂ 7(ಎ) ಪಿಸಿ ಕಾಯ್ದೆ 1988 (ತಿದ್ದುಪಡಿ-2018) ರಡಿಯಲ್ಲಿ ದಾಖಲಿಸಿಕೊಂಡಿರುತ್ತದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಆಪಾದಿತ ಅಧಿಕಾರಿಯು ಇಂದು ದಿನಾಂಕಃ 26.03.2024 ರಂದು ತನ್ನ ಕೊಠಡಿಯಲ್ಲಿ ಫಿರ್ಯಾದಿಯಿಂದ ಲಂಚದ ಹಣವನ್ನು ಸ್ವೀಕರಿಸುವ ವೇಳೆ ಯಶಸ್ವಿಯಾಗಿ ಟ್ರ್ಯಾಪ್ಮಾಡಿ ಸದರಿ ಸಹಾಯಕ ಕಾರ್ಯಪಾಲಕ ಅಭಿಯಂತರ, ಪಂಚಾಯತ ರಾಜ್ ಉಪವಿಭಾಗ ಖಾನಾಪೂರ ಶ್ರೀ ದುರದುಂಡೇಶ್ವರ ಮಹಾದೇವ ಬನ್ನೂರ ರವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಜರುಗಿಸಲಾಗಿರುತ್ತದೆ. ಸದರಿ ಟ್ರ್ಯಾಪ್ ಕಾರ್ಯಾಚರಣೆಯನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀಹನಮಂತರಾಯ ಐಪಿಎಸ್ ಕರ್ನಾಟಕ ಲೋಕಾಯುಕ್ತ ಬೆಳಗಾವಿ ರವರ ಮಾರ್ಗದರ್ಶನದಲ್ಲಿ ಶ್ರೀಭರತ ರಡ್ಡಿ, ಡಿ.ಎಸ್.ಪಿ, ಲೋಕಾಯುಕ್ತ ಬೆಳಗಾವಿ, ಶ್ರೀ ರವಿಕುಮಾರ ಧರ್ಮಟ್ಟಿ, ಪೊಲೀಸ್ಇನ್ಸ್‌ಪೆಕ್ಟರ್, ಶ್ರೀ ಉಸ್ಮಾನ ಅವಟಿ, ಪೊಲೀಸ್ ಇನ್ಸ್‌ಪೆಕ್ಟರ್, ಲೋಕಾಯುಕ್ತ ಬೆಳಗಾವಿ ಮತ್ತುಸಿಬ್ಬಂದಿಗಳಾದ ವಿಠಲ ಬಸಕ್ತಿ ಸಿಎಚ್‌ಸಿ, ಸಂತೋಷ ಬೇಡಗ ಸಿಪಿಸಿ, ಗಿರೀಶ ಪಾಟೀಲ, ಸಿಪಿಸಿ,ಲಗಮಣ್ಣಾ ಹೊಸಮನಿ ಸಿಪಿಸಿ, ಬಸವರಾಜ ಹುದ್ದಾರ ಸಿಪಿಸಿ, ಬಸವರಾಜ ಕೊಡೊಳ್ಳಿ ತಂಡದವರಿಂದ ಕೈಗೊಳ್ಳಲಾಗಿರುತ್ತದೆ.