ಅಪರೂಪದ ಗುರು ಶಿಷ್ಯರ ಸಮಾಗಮಕ್ಕೆ ಸಾಕ್ಷಿಯಾಯ್ತು ಅಥಣಿಯ ಸಂಕೋನಟ್ಟಿ ಶಾಲೆ... ಹೌದು. ಮೂವತ್ತು ವರ್ಗಳ ಹಿಂದೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ಹಳೆವಿದ...
ಅಪರೂಪದ ಗುರು ಶಿಷ್ಯರ ಸಮಾಗಮಕ್ಕೆ ಸಾಕ್ಷಿಯಾಯ್ತು ಅಥಣಿಯ ಸಂಕೋನಟ್ಟಿ ಶಾಲೆ...
ಹೌದು. ಮೂವತ್ತು ವರ್ಗಳ ಹಿಂದೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ಹಳೆವಿದ್ಯಾರ್ಥಿಗಳೆಲ್ಲ ಒಂದೆಡೆ ಸೇರಿ ಸಂಭ್ರಮಿಸಿದ ಅಪರೂಪದ ಘಟನೆಗೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಸಾಕ್ಷಿಯಾಗಿದೆ.
ವರ್ಧಮಾನ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ 2023 ರ ವೆರೆಗೆ ಕಲಿತ ಎಲ್ಲ ವಿದ್ಯಾರ್ಥಿಗಳು ಶಾಲೆಯಲ್ಲಿ ದಾಖಲೆಗೂ ಮೀರಿ ಒಟ್ಟಿಗೂಡುವ ಮೂಲಕ ಪ್ರೀತಿ ಪಾತ್ರಕ್ಕೆ ಮೆರಗು ತಂದರು.
ಹಳೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಂದೆಡೆ ಸೇರಿ ತಮಗೆ ವಿದ್ಯೆಯನ್ನು ಧಾರೆ ಎರೆದ ಶಿಕ್ಷಕ ದೇವರುಗಳಿಗೆ ಗೌರವದ ಗುರುವಂದನೆ ಸಲ್ಲಿಸಿದರು.
ಇಂದಿನ ದಿನಮಾನಗಳಲ್ಲಿ ಒಂದು ಶಾಲೆ ಮುಗಿಸಿ ಅಲ್ಲಿಂದ ಮೆಟ್ಟಿಲು ಇಳಿದು ಹೊರಟು ಬಿಟ್ಟರೆ ಶಾಲೆಯ ನೆನಪುಗಳು ಮರೆಯಾಗುತ್ತ ಹೋಗುತ್ತವೆ.
ಆದ್ರೆ ತಾವು ಕಲಿತ ಶಾಲೆಯ ಪ್ರಾಮಾಣಿಕ ನಿಷ್ಠೆಯಿಂದೆ ವಿದ್ಯೆಯನ್ನು ಧಾರೆ ಎರೆದ ಶಿಕ್ಷಕ ದೇವರುಗಳು ಮರಿಚಿಕೆಯಾಗುತ್ತಿರುವ ಇಂದಿನ ದಿನಗಳಲ್ಲಿ ಈ ಹಳೆಯ ವಿದ್ಯಾರ್ಥಿಗಳ ಸಮಾಗಮ ನಿಜಕ್ಕೂ ಶಿಕ್ಷಕರು ವಿದ್ಯಾರ್ಥಿಗಳು ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾಗಿದೆ.
ಶಾಲೆಯಲ್ಲಿ ಒಟ್ಟಿಗೆ ಕಲಿತ ಜೀವದ ಗೆಳೆಯ ,ಗೇಳತಿಯರು ಮತ್ತೆ ಭೇಟಿಯಾಗೋದು ತುಂಬಾ ಅಪರೂಪ. ಅದ್ರಲ್ಲೂ ಇಡೀ ಶಾಲೆಯ ಹಳೆ ವಿದ್ಯಾರ್ಥಿಗಳು ಒಂದೆಡೆಗೆ ಮತ್ತೆ ಸೇರೋದು ಅಂದ್ರೆ ಅದು ಕನಸಿನ ಮಾತು ಹೌದು. ಶಾಲೆಯಲ್ಲಿ ಕಲಿತ ಮೂರು ಸಾವಿರಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳು ಮತ್ತೆ ಒಟ್ಟಿಗೆ ಸೇರಿ ಶಿಕ್ಷಕರ ಪ್ರೀತಿ ಪಾತ್ರಕ್ಕೆ ಸಾಕ್ಷಿಯಾಗಿದ್ದಾರೆ. ಅಷ್ಟೇ ಅಲ್ಲದೆ ತಮಗೆ ವಿದ್ಯೆ ನೀಡಿದ ಗುರುಗಳನ್ನ ಹೊತ್ತು ಪುಷ್ಪಗಳ ಸುರಿಮಳೆಯಲ್ಲಿ ಊರ ತುಂಬೆಲ್ಲ ಮೆರವಣಿಗೆ ಮಾಡಿದ್ದಾರೆ..
ಇನ್ನೂ ನಂದನವನದಲ್ಲಿ ಗುರುವಂದನಾ ಕಾರ್ಯಕ್ರಮ ಹಿನ್ನೆಲೆ ತಮಗೆ ಶಿಕ್ಷಣ ನೀಡಿ ಬದುಕು ಕಟ್ಟಿಕೊಳ್ಳಲು ಕಾರಣಕರ್ತರಾದ ಗುರುಗಳನ್ನ ಸಂಕೋನಟ್ಟಿ ಗ್ರಾಮದಲ್ಲಿ ಗೌರವದಿಂದ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ನಿಂತ 3 ಸಾವಿರ ಹಳೆಯ ವಿದ್ಯಾರ್ಥಿಗಳು ಗುರುಗಳಿಗೆ ಪುಷ್ಪಗಳ ಮಳೆ ಸುರಿಸಿದರು. ಸ್ವತಃ ಶಾಲೆಯ ವಿದ್ಯಾಥಿವೃಂದವೇ ಜಾಂಜ್ ಪಥಾಕ್ ಬಾರಿಸುತ್ತ ಶಿಕ್ಷಕರ ಮೆರವಣಿಯ ಮೂಲಕ ಮೆರವಣಿಗೆ ಮಾಡಿದ್ದುವಿಶೇಷವಾಗಿತ್ತು.
ಕಲೆತ ಶಾಲೆಯ ಮೇಲೆ ಹಳೆಯ ವಿದ್ಯಾರ್ಥಿಗಳಿಗೆ ಅದೆಷ್ಟು ಪ್ರೀತಿ, ವಾತ್ಸಲ್ಯ ರೂಪದ ಕಾಳಜಿ ಇರುತ್ತೆ ಎನ್ನುವುದಕ್ಕೆ ಸಂಕೋನಟ್ಟಿ ಗ್ರಾಮದ ವರ್ಧಮಾನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ರಜತಮಹೋತ್ಸವ ಸಾಕ್ಷಿಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಗುರುವಂದನೆ ಕಾರ್ಯಕ್ರಮಹಿನ್ನೆಲೆ ಹಳೆಯ ವಿದ್ಯಾರ್ಥಿಗಳು ಶಾಲೆಗೆ ಬೇಕಾದ ಅವಶ್ಯಕ ಪರಿಕರ, ಧ್ವಜಕಟ್ಟೆ, ಸರಸ್ವತಿ ದೇವಿಯ ಮೂರ್ತಿ, ಪೀಠಗಳು ಸೇರಿ ಅನೇಕ ಪೀಠೋಪಕರಣಗಳನ್ನು ಕಾಣಿಕೆಯಾಗಿನೀಡಿದ್ದಾರೆ.
2004-05ನೇ ಬ್ಯಾಚ್ ವಿದ್ಯಾರ್ಥಿಗಳು ಬಡಮಕ್ಕಳಿಗಾಗಿ 1.41 ಲಕ್ಷ ರೂಪಾಯಿಗಳನ್ನ ಬಡವಿದ್ಯಾರ್ಥಿಗಳ ನಿಧಿಗೆ ಜಮೆ ಮಾಡಿದ್ದಾರೆ. ಒಟ್ಟು20ಲಕ್ಷದ ವರೆಗೆ ವಿವಿಧ ರೂಪದಲ್ಲಿ ಹಳೆ ವಿದ್ಯಾರ್ಥಿಗಳು ದೇಣಿಗೆಯನ್ನ ನೀಡಿ ಶಾಲೆಗೆ ಸಪೋರ್ಟ್ ಸಿಸ್ಟಮ್ ಮೂಲಕ ಆಪತ್ಭಾಂದವರಾಗಿದ್ದಾರೆ.
ಇನ್ನೂ ಎಷ್ಟೋ ವರ್ಷಗಳ ಬಳಿಕ ಸಿಕ್ಕ ಹಳೆಗೆಳೆಯರನ್ನ ಕಂಡ ಯುವಕ-ಯುವತಿಯರು ಕಣ್ಣೀರಾದ ದೃಶ್ಯಗಳು ನಿಜಕ್ಕೂ ಎಲ್ಲರ ಮನಕಲಕುವಂತಿದ್ದವು. ಜೊತೆಗೆ ತಮಗೆ ವಿದ್ಯೆ ನೀಡಿದ ಶಿಕ್ಷಕರನ್ನ ಕಂಡು ಶಿಷ್ಯರು ಆನಂದಬಾಷ್ಪ ಸುರಿಸಿದ್ದು ಕಂಡು ಬಂತು. ಇನ್ನೂ ತಮ್ಮ ಕೈಯಲ್ಲಿ ಕಲಿತು ಇಂದು ಉನ್ನತಮಟ್ಟಕ್ಕೆ ಬೆಳೆದ ಶಿಷ್ಯರ ಸಾಧನೆಯನ್ನ ಕಂಡ ಗುರುಗಳೂ ಭಾವುಕರಾದ ಸನ್ನಿವೇಶವೂ ಜರುಗಿತು.
ಇತ್ತ ತಮ್ಮ ಊರಲ್ಲಿ ಹೊತ್ತು ಮೆರೆಸಿ ಪಾದಕ್ಕೆರಗಿದ ಹಳೆ ವಿದ್ಯಾರ್ಥಿಗಳ ಪ್ರೀತಿ,ಆದರದ ಗೌರವಕ್ಕೆ ವೇದಿಕೆಮೇಲೆ ಶಿಕ್ಷಕರು ಕಣ್ಣೀರು ಹಾಕಿದ್ರು.. ತಾವು ಕಲಿತ ಶಾಲಾಕೊಠಡಿಯಲ್ಲಿ ಕೂತು ಹಳೆ ನೆನಪುಗಳ ಮೆಲುಕುಹಾಕಿದ ವಿದ್ಯಾರ್ಥಿಗಳು, ತಮ್ಮ ಗುರುಗಳ ಮಾತು ಕೇಳಿ ವಿದ್ಯಾರ್ಥಿಗಳು ಕಣ್ಣೀರು ಹಾಕಿದ ಘಟನೆಯು ನಡೆಯಿತು,.
ವಿಶೇಷ ವರದಿ ಅಲ್ಲಾವುದ್ದೀನ್ ಶೇಖ್ newsprime24x7 ಕನ್ನಡ