ಗೃಹಲಕ್ಷ್ಮಿ ಯೋಜನೆಯ ₹2000 ನಿಮ್ಮ ಖಾತೆಗೆ ಬಂದಿಲ್ವಾ? 4000 ಒಟ್ಟಿಗೆ ಬರುತ್ತಾ? ಇಲ್ಲಿದೆ ಮಾಹಿತಿ..

  Gruha Lakshmi: ಗೃಹಲಕ್ಷ್ಮಿ ಯೋಜನೆಯ ₹2000 ನಿಮ್ಮ ಖಾತೆಗೆ ಬಂದಿಲ್ವಾ? 4000 ಒಟ್ಟಿಗೆ ಬರುತ್ತಾ? ಇಲ್ಲಿದೆ ಮಾಹಿತಿ.. ಮಹಿಳೆಯರ ಆರ್ಥಿಕ ಸಬಲೀಕರಣ ಹೆ...

 Gruha Lakshmi: ಗೃಹಲಕ್ಷ್ಮಿ ಯೋಜನೆಯ ₹2000 ನಿಮ್ಮ ಖಾತೆಗೆ ಬಂದಿಲ್ವಾ? 4000 ಒಟ್ಟಿಗೆ ಬರುತ್ತಾ? ಇಲ್ಲಿದೆ ಮಾಹಿತಿ..

ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸಲು ಕುಟುಂಬದ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಕೂಡ ಜಾರಿ ಮಾಡಿ ಮೊದಲ ಕಂತಿನ ಹಣವನ್ನು ನೀಡಲಾಗಿದೆ. ಆದರೆ ಈವರೆಗೆ ಅರ್ಜಿಸಲ್ಲಿಸಿದ ಸುಮಾರು 9,44,155 ಅರ್ಜಿದಾರರಿಗೆ ಹಣ ತಲುಪಿಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.


ಸರ್ಕಾರ ಚುನಾವಣೆಗೂ ಮುನ್ನ ಘೋಷಿಸಿದಂತೆ ಯುವನಿಧಿ ಯೋಜನೆ ಬಿಟ್ಟು ಉಳಿದ ನಾಲ್ಕು ಯೋಜನೆಗಳನ್ನ ಜಾರಿಗೆ ತಂದಿದೆ. ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಕೊರತೆಯಿಂದ 5 ಕೆಜಿ ಅಕ್ಕಿ ನೀಡಿ 5 ಕೆಜಿಗೆ ಹಣವನ್ನು ನೀಡುತ್ತಿದೆ.

ಇನ್ನು ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸಲು ಕುಟುಂಬದ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನಗೆ ಕೂಡ ಜಾರಿ ಮಾಡಿ ಮೊದಲ ಕಂತಿನ ಹಣವನ್ನು ನೀಡಲಾಗಿದೆ. ಈವರೆಗೆ ಅರ್ಜಿಸಲ್ಲಿಸಿದ ಸುಮಾರು 9,44,155 ಅರ್ಜಿದಾರರಿಗೆ ಹಣ ತಲುಪಿಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ತಿಳಿಸಿದ್ದಾರೆ.


ಅರ್ಜಿಸಲ್ಲಿಸಿರುವವರಲ್ಲಿ 3082 ಅರ್ಜಿದಾರರು ಮರಣ ಹೊಂದಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿದೆ. 1,59,356 ಅರ್ಜಿದಾರರ ಡೆಮೋ ದೃಢೀಕರಣ ವಿಫಲವಾಗಿದೆ. ಇದಕ್ಕೆ ಕಾರಣ ಫಲಾನುಭವಿಗಳ ಆಧಾರ್ ಹಾಗೂ ಬ್ಯಾಂಕ್ ಖಾತೆ ಹೆಸರಿನಲ್ಲಿ ವ್ಯತ್ಯಾಸವಾಗಿದೆ. ಈಗಾಗಲೇ ಅವುಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ ಎಂದು ಸಚಿವೆ ತಿಳಿಸಿದ್ದಾರೆ.


ಇನ್ನು 5,96,268 ಫಲಾನುಭವಿಗಳ ಖಾತೆ ಆಧಾರ್ ಕಾರ್ಡ್​ಗೆ ಲಿಂಕ್ ಆಗಿಲ್ಲ. ಆದರೆ 2,17,536 ಫಲಾನುಭವಿಗಳ ಬ್ಯಾಂಕ್ ಖಾತೆ ಆಧಾರ್ ನೊಂದಿಗೆ ಲಿಂಕ್ ಆಗಿದ್ದು, ಅವರಿಗೆ ಯೋಜನೆಯ ಹಣ ಹೋಗಿದೆ. ಉಳಿದ ಫಲಾನುಭವಿಗಳಿಗೂ ಸಿಡಿಪಿಒ ಮಾಹಿತಿ ನೀಡಿ ಆಧಾರ್ ಫೀಡ್ ಮಾಡಿಸಲು ಕ್ರಮ ವಹಿಸಲಾಗಿದೆ.

ಸುಮಾರು 1,75,683 ಫಲಾನುಭವಿಗಳ ಹೆಸರು ಮತ್ತು ವಿಳಾಸದಲ್ಲಿ ವ್ಯತ್ಯಾಸವಾಗಿದೆ. ಬ್ಯಾಂಕ್ ಗಳ ಮೂಲಕ ಫಲಾನುಭವಿಗಳ ಇ-ಕೆವೈಸಿ ಮಾಡಿಸಲು ಇಲಾಖೆ ಕ್ರಮ ವಹಿಸಿದೆ. 9,766 ಇಂದೀಕರಿಸಿದ ದತ್ತಾಂಶದಿಂದಾಗಿ ಉಂಟಾದ ವಿಳಂಬವನ್ನು ಸೇವಾಸಿಂಧು ವತಿಯಿಂದ ಪುನರ್ ಪರಿಶೀಲಿಸಲಾಗುತ್ತಿದೆ ಎಂದು ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಒಟ್ಟಾರೆ ಯೋಜನೆಯ 1.8 ಕೋಟಿ ಅರ್ಹ ಫಲಾನುಭವಿಗಳಿಗೆ ಆಗಸ್ಟ್​ 30 2169 ಕೋಟಿ ರೂ. ಅನುದಾನವನ್ನು ಸರಕಾರ ಬಿಡುಗಡೆಗೊಳಿಸಿತ್ತು. ಸೆಪ್ಟಂಬರ್ ತಿಂಗಳಲ್ಲಿ 1.14 ಲಕ್ಷ ಫಲಾನುಭವಿಗಳಿಗೆ 2280 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ.

ಅಕ್ಟೋಬರ್ 4 ರವರೆಗೆ 93 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲಾ 2 ಸಾವಿರ ರೂಪಾಯಿ ಯಶಸ್ವಿಯಾಗಿ ವರ್ಗಾಯಿಸಲಾಗಿದೆ. 5.5 ಲಕ್ಷ ಫಲಾನುಭವಿಗಳ ಮಾಹಿತಿ ಪರಿಶೀಲಿಸಿ ಡಿಬಿಟಿ ಮೂಲಕ ಹಣ ಪಾವತಿಸಲು ಕ್ರಮ ಕೈಗೊಂಡಿರುವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾರ್ಳಕರ್ ತಿಳಿಸಿದ್ದಾರೆ

ಅಕ್ಟೋಬರ್ 13ರವರೆಗೆ ಅಗತ್ಯ ಇರುವ ತಿದ್ದುಪಡಿಯನ್ನು ಮಾಡಿಕೊಂಡರೆ ನವರಾತ್ರಿ ಹಬ್ಬಕ್ಕೆ ಮನೆ ಯಜಮಾನಿಯರಿಗೆ 2ನೇ ಕಂತಿನ ಹಣ ಹಾಗೂ ಮೊದಲ ಕಂತು ಬರದೇ ಇರುವವರಿಗೆ ಒಟ್ಟಿಗೆ 4000 ಹಣ ಜಮಾ ಆಗಲಿದೆ ಎಂದು ತಿಳಿದುಬಂದಿದೆ.

Name

Accident news:,1,Annabhagya:,3,athani news:,6,Athaninews,1,Bagalkote News,1,Belagavi News:,4,Belagavi suddi:,1,Bengalore news:,1,Bengaluru:,3,Bigboss Kannada:,1,Bigg Boss ks10:,1,Braking news:,1,Breaking news,3,Breaking news:,6,Chandrayaan-3,1,Chandrayan-3,1,corona19 update today:,1,Crime news,1,Crime News chikkodi,1,crime news:,6,crime prime special:,1,Crime Prime:,2,Crime story...,2,cyber crime,1,Election 2024,1,Graha Lakshmi scheme,2,Graha Lakshmi scheme:,1,gruha jothi,1,gruha Lakshmi scheme:,1,Gruha Lakshmi:,2,Gruha Laksmi,3,gruha Laksmi scheme,3,Gruha Laksmi:,2,gruhalakshmi scheme:,2,guarantee scheme:,1,High court:,1,HSRP karnataka news:,1,Hubbali news:,1,ISRO,1,Kagawad news:,1,Karnataka education:,2,Karnataka lokayukta,1,karnataka Lokayukta:,1,Karnataka news,1,Karnataka news:,20,Karnataka police,2,Karnataka politics,1,Karnataka politics:,1,Karnataka Suddi:,1,Lok sabha election 2024,1,Loka News:,1,Lokayukta Raid:,2,Lokayukta:,1,Love story news,1,mysuru dasara:,1,Pakistan to India love story,1,political news,3,Psi Scam,1,Ration card :,1,Ration card ekyc:,1,Ration card Karnataka:,1,School Rajatmohastava:,1,Shakti scheme,1,Shakti Yojana,1,SSLC Results karnataka:,1,State,1,State Govt guarantee releted...,1,State news,4,Tiger Claw pendant :,1,Tiger Claw pendant:,1,Varamahalakshmi Festival:,1,ಅಥಣಿ ಸುದ್ದಿ:,2,ಅನ್ನ ಭಾಗ್ಯ,1,ಕರ್ನಾಟಕ ಸುದ್ದಿ:,2,
ltr
item
News Prime Kannada: ಗೃಹಲಕ್ಷ್ಮಿ ಯೋಜನೆಯ ₹2000 ನಿಮ್ಮ ಖಾತೆಗೆ ಬಂದಿಲ್ವಾ? 4000 ಒಟ್ಟಿಗೆ ಬರುತ್ತಾ? ಇಲ್ಲಿದೆ ಮಾಹಿತಿ..
ಗೃಹಲಕ್ಷ್ಮಿ ಯೋಜನೆಯ ₹2000 ನಿಮ್ಮ ಖಾತೆಗೆ ಬಂದಿಲ್ವಾ? 4000 ಒಟ್ಟಿಗೆ ಬರುತ್ತಾ? ಇಲ್ಲಿದೆ ಮಾಹಿತಿ..
https://blogger.googleusercontent.com/img/a/AVvXsEgvzXknXDxBF4Jz8lQHg1hqOvyIg2UJZbwmUYZTLSGCL_eU5yI0FAGHxlz5WlWW9UlSIJoj47gUZoaEiR-8ZUMHjg3RLSmEb_04dO32kJvzor-hIvXEI620GjQ4pkt62zNfymveSg53Spfgw_kp_8lCiWl9PbtBeqb8_gmpy2LGixUc8ABXrjJB6QI6Yfo
https://blogger.googleusercontent.com/img/a/AVvXsEgvzXknXDxBF4Jz8lQHg1hqOvyIg2UJZbwmUYZTLSGCL_eU5yI0FAGHxlz5WlWW9UlSIJoj47gUZoaEiR-8ZUMHjg3RLSmEb_04dO32kJvzor-hIvXEI620GjQ4pkt62zNfymveSg53Spfgw_kp_8lCiWl9PbtBeqb8_gmpy2LGixUc8ABXrjJB6QI6Yfo=s72-c
News Prime Kannada
https://www.newsprimekannada.com/2023/10/2000-4000.html
https://www.newsprimekannada.com/
https://www.newsprimekannada.com/
https://www.newsprimekannada.com/2023/10/2000-4000.html
true
8472716346338202923
UTF-8
Loaded All Posts Not found any posts VIEW ALL Readmore Reply Cancel reply Delete By Home PAGES POSTS View All RECOMMENDED FOR YOU LABEL ARCHIVE SEARCH ALL POSTS Not found any post match with your request Back Home Sunday Monday Tuesday Wednesday Thursday Friday Saturday Sun Mon Tue Wed Thu Fri Sat January February March April May June July August September October November December Jan Feb Mar Apr May Jun Jul Aug Sep Oct Nov Dec just now 1 minute ago $$1$$ minutes ago 1 hour ago $$1$$ hours ago Yesterday $$1$$ days ago $$1$$ weeks ago more than 5 weeks ago Followers Follow THIS PREMIUM CONTENT IS LOCKED STEP 1: Share to a social network STEP 2: Click the link on your social network Copy All Code Select All Code All codes were copied to your clipboard Can not copy the codes / texts, please press [CTRL]+[C] (or CMD+C with Mac) to copy Table of Content