*ರಬಕವಿ ಬನಹಟ್ಟಿ* : ಶೃದ್ಧಾಂಜಲಿ ಮದುವೆಯ ಕಾರ್ಯಕ್ರಮಗಳಿಗೆ ಔತನಕೂಟ ಏರ್ಪಾಟ ಮಾಡಿಕೊಳ್ಳುವುದು ಸಹಜ , ಆದರೆ ಇತ್ತೀಚಿಗೆ ಸಾವಿನ ದವಡೆಯಿಂದ ಪಾರಾದ ವ್...
*ರಬಕವಿ ಬನಹಟ್ಟಿ* :
ಶೃದ್ಧಾಂಜಲಿ ಮದುವೆಯ ಕಾರ್ಯಕ್ರಮಗಳಿಗೆ ಔತನಕೂಟ ಏರ್ಪಾಟ ಮಾಡಿಕೊಳ್ಳುವುದು ಸಹಜ , ಆದರೆ ಇತ್ತೀಚಿಗೆ ಸಾವಿನ ದವಡೆಯಿಂದ ಪಾರಾದ ವ್ಯಕ್ತಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರಸಭೆ ವ್ಯಾಪ್ತಿಯ ರಾಂಪುರ ನಗರದ , ಖಲೀಲ್ ರಾಜನ್ನವರ್ ತನ್ನ ಸಂತಸ ಮುಗಿಲು ಮುಟ್ಟಿದ್ದಲ್ಲದೆ, ಜೀವ ಉಳಿದ ಹಾಗೂ ಉಳಿಸಿದಕ್ಕಾಗಿ , ಸಾವಿರಾರು ಜನತೆಗೆ ಔತನಕೂಟ ಏರ್ಪಡಿಸುವುದರ ಮೂಲಕ , ಸೃಷ್ಟಿಕರ್ತನಿಗೆ ಹೃದಯಪೂರ್ವಕವಾಗಿಅಭಿನಂದನೆ ಮಾಡುವುದರ ಮೂಲಕ , ನೆಮ್ಮದಿ ಕಾಣುವಲ್ಲಿ ವಿಶೇಷವಾಗಿತ್ತು.
ನಡೆದಿದ್ದೇನು ?
ಈಚೆಗೆ ಬೆಳಗಾವಿ ಜಿಲ್ಲೆಯ ಮಲ್ಲಾಪುರ ಗ್ರಾಮದ ಬಳಿ ಘಟಪ್ರಭಾ ನದಿಯಲ್ಲಿ ಮುಳುಗುತ್ತಿದ್ದ ರಬಕವಿ-ಬನಹಟ್ಟಿ ನಗರಸಭೆಯ ವ್ಯಾಪ್ತಿಯ ರಾಮಪುರ ನಗರದ ವ್ಯಕ್ತಿ ಖಲೀಲ ರಾಜನ್ನವರನನ್ನು ಹಿಂದೂ ಯುವಕ ಮಲ್ಲಾಪುರ ಗ್ರಾಮದ ವಿಠ್ಠಲ ಒಡೆಯರ್ ಜೀವವನ್ನು ಕಾಪಾಡುವಲ್ಲಿ ಪೂರ್ಣ ಯಶಸ್ವಿಯಾಗಿದ್ದಾನೆ.
ನದಿ ದಡದ ಬಳಿ ಸೈಕಲ್‌ನಲ್ಲಿ ಹೋಗುತ್ತಿದ್ದ ವಿಠ್ಠಲ ಘಟಪ್ರಭಾ ನದಿಯಲ್ಲಿ ಕಾರೊಂದು ಕೊಚ್ಚಿ ಹೋಗುತ್ತಿರುವದನ್ನು ಗಮನಿಸಿದ್ದಾನೆ. ಇಬ್ಬರು ಪ್ರಯಾಣಿಕರಿದ್ದ ಕಾರಿನಿಂದ ಓರ್ವ ಮಾತ್ರ ಹೊರ ಬಂದು ಈಜಿ ದಡ ಸೇರಿದ್ದಾನೆ.
ಮತ್ತೊರ್ವ ಪ್ರಯಾಣಿಕ ವಾಹನದಲ್ಲಿ ಸಿಲುಕಿಕೊಂಡಿರುವದನ್ನು ಗಮನಿಸಿ ಈಜು ಬರುವದಿಲ್ಲವೆಂದು ಅರಿತ ವಿಠ್ಠಲ, ತಕ್ಷಣ ನದಿಗೆ ಹಾರಿ ಕಾರನ್ನು ತಲುಪಿo ಪ್ರಯಾಣಿಕನನ್ನು ಸುರಕ್ಷಿತವಾಗಿ ಹೊರಗೆಳೆದು ನದಿಯ ದಡಕ್ಕೆ ಕರೆದೊಯ್ದ ಸಿನಿಮೀಯ ಘಟನೆ ನಡೆದಿತ್ತು.
ಇದರ ಸಂಭ್ರಮಕ್ಕಾಗಿ ಶುಕ್ರವಾರದಂದು ರಬಕವಿ-ಬನಹಟ್ಟಿಯ ಸಾವಿರಾರು ಜನರಿಗೆ ಔತನಕೂಟದೊಂದಿಗೆ ಸಂಭ್ರಮಿಸುವ ಮೂಲಕ ತನ್ನ ಜೀವದಾನಕ್ಕೆ ಕಾರಣನಾದ ಯುವಕ ವಿಠ್ಠಲ ಒಡೆಯರ್ ಅವರನ್ನು ಸನ್ಮಾನಿಸಿದ ವಿಶೇಷ ಘಟನೆ ನಡೆಯಿತು.
ಇದೇ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಜಮೀಯತೆ ಉಲೇಮ ಹಿಂದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮೌಲಾನ ಮೋಸಿನ್ ಗೋಕಾಕ್ ಹಾಗೂ ಅರುಣ್ ಬೇವೂರ್,
ಅಯ್ಯುಬ ಖಾನ್ ಹೊರಟ್ಟಿ , ಇನ್ನೂ ಹಲವಾರು ನಗರದ ಗಣ್ಯ ವ್ಯಕ್ತಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು .
ವರದಿ :
ಪ್ರದೀಪ್ ದೇಶಪಾಂಡೆ