ಸ್ಥಳ : ಹೊನ್ನಾವರ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕರ್ಕಿ ಗ್ರಾಮದ ಬಡಗಣಿ ನದಿಯಿಂದ ಪಾವಿನ ಕುರ್ವಾ ಗ್ರಾಮಕ್ಕೆ ಸಂಪರ್ಕ ಮಾಡಲು ಕಳೆದ 20 ವ...
ಸ್ಥಳ : ಹೊನ್ನಾವರ
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕರ್ಕಿ ಗ್ರಾಮದ ಬಡಗಣಿ ನದಿಯಿಂದ ಪಾವಿನ ಕುರ್ವಾ ಗ್ರಾಮಕ್ಕೆ ಸಂಪರ್ಕ ಮಾಡಲು ಕಳೆದ 20 ವರ್ಷಗಳ ಹಿಂದೆ ತೂಗು ಸೇತುವೆಯನ್ನು ನಿರ್ಮಿಸಲಾಗಿತ್ತು, ಆದರೇ ಆದೇ ತೂಗು ಸೇತುವೆ ಸಂಪೂರ್ಣವಾಗಿ ತುಕ್ಕು ಹಿಡಿದಿದ್ದು,
ಇದೇ ಜಾಗದಿಂದ ಅರಬಿ ಸಮುದ್ರಕ್ಕೆ ಸೇರಲ್ಪಡುವ ತುಂಬಾನೇ ಆಳವಾಗಿರುವ ಬಡಗಣಿ ನದಿಗೆ ಯಾವಾಗಲಾದ್ರೂ ಕುಸಿಯ ಬಹುದು ಎಂಬ ಭೀತಿಯಲ್ಲಿ ಜೀವದ ಭಯದ ನಡುವೆಯೇ ದಿನನಿತ್ಯ ಇದೇ ಸೇತುವೆ ಮೂಲಕ ಶಾಲಾ ಮಕ್ಕಳು ಸೇರಿದಂತೆ ಗ್ರಾಮಸ್ಥರು, ದ್ವಿಚಕ್ರ ವಾಹನ ಸವಾರರು ಸಂಚಾರ ಮಾಡುತ್ತಿದ್ದಾರೆ. ಇನ್ನೂ ಕರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪಾವಿನ ಕುರ್ವಾ ಗ್ರಾಮಕ್ಕೆ ಹೋಗಬೇಕಾದ್ರೆ ಇದೇ ಬಡಗಣಿ ನದಿಯನ್ನು ದಾಟಿ ಹೋಗಬೇಕಾಗಿದ್ದು, ತೂಗು ಸೇತುವೆಯು ಸಹ ಸಂಪೂರ್ಣವಾಗಿ ತುಕ್ಕು ಹಿಡಿದಿರುವುದು ಹಾಗೂ ಸೇತುವೆಯಲ್ಲಿ ಹೋಗಬೇಕಾದ್ರೆ ಹಾಕಲಾಗಿರುವ ಸಿಮೆಂಟ್ ಸೀಟುಗಳು ಹಾಗೂ ಕೆಳಗಡೆ ಹಾಕಲಾಗಿರುವ ಕಬ್ಬಿಣದ ಸರಳುಗಳು ಸಹ ತುಂಬಾನೇ ತುಕ್ಕು ಹಿಡಿದು ದುಸ್ಥಿತಿಯಲ್ಲಿರುವುದರಿಂದ ಯಾವ ಕ್ಷಣದಲ್ಲಾದರೂ ಈ ಸೇತುವೆ ಮುರಿದು ಬಿದ್ದು ಸಾವು ನೋವುಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಇನ್ನೂ ಈ ತುಕ್ಕು ಹಿಡಿದು ಸಂಪೂರ್ಣವಾಗಿ ಹಾಳಾದ ತೂಗು ಸೇತುವೆಯನ್ನು ದುರಸ್ತಿ ಮಾಡಿ ನಮಗೆ ರಕ್ಷಣೆ ಕೊಡಿ ಎಂದು ಪರಿ ಪರಿಯಾಗಿ
ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಿತಕ್ಕೆ ಮನವಿ ಸಲ್ಲಿಸಿ ಬೇಡಿಕೊಂಡರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ, ಆದ್ದರಿಂದ ಇಲ್ಲಿನ ಸ್ಥಳೀಯರ ಮನವಿ ಮೇರೆಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ವಿಶೇಷ ಪ್ರತಿನಿಧಿ ಬಸವರಾಜು ಈ ಸ್ಥಳಕ್ಕೆ ಭೇಟಿಕೊಟ್ಟು ಇಲ್ಲಿನ ಸ್ಥಳೀಯರ ಅಭಿಪ್ರಾಯ ಸಂಗ್ರಹ ಮಾಡಿ ಸಮಸ್ಯೆಗಳ ಸಮಗ್ರವಾಗಿ ವರದಿ ತಯಾರಿಸಿ ಕುಮಟಾ-ಹೊನ್ನಾವರ ಶಾಸಕರಾದ ದಿನಕರ್ ಶೆಟ್ಟಿ ಹಾಗೂ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆದ ವಿಷ್ಣುವರ್ಧನ್ Ips ಅವರಿಗೆ ಕರೆ ಮಾಡಿ ಈ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಗಮನಕ್ಕೆ ತೆಗೆದುಕೊಂಡು ಬಂದು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಈ ಅಪಾಯಕ್ಕೆ ಕಾಯ್ದು ಕುಳಿತಿರುವ ಈ ತುಕ್ಕು ಹಿಡಿದ ಸೇತುವೆಗೆ ಕಾಯಕಲ್ಪ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.
✒️ವಂದನೆಗಳು. Newsprime24x7 ✍️
ಶ್ರೀ ಬಸವರಾಜು. ರಾಜ್ಯ ವಿಶೇಷ ಪ್ರತಿನಿಧಿ. 6360224654