ಗದಗ :- ಪತಿಯ ಕಣ್ಣಿಗೆ ಕಾರದಪುಡಿ ಎರಚಿದ್ದಲ್ಲದೆ, ಪತ್ನಿಯನ್ನು ಹೊತ್ತೊಯ್ಯಲಾಗಿದೆ. ಗದಗ ದ ಡಿಸಿ ಮಿಲ್ ಪ್ರದೇಶದಲ್ಲಿ ಘಟನೆ ನಡೆದಿದೆ. ಅಭಿಷೇಕ್ ಹಾಗೂ ಹ...
ಗದಗ :- ಪತಿಯ ಕಣ್ಣಿಗೆ ಕಾರದಪುಡಿ ಎರಚಿದ್ದಲ್ಲದೆ, ಪತ್ನಿಯನ್ನು ಹೊತ್ತೊಯ್ಯಲಾಗಿದೆ. ಗದಗ ದ ಡಿಸಿ ಮಿಲ್ ಪ್ರದೇಶದಲ್ಲಿ ಘಟನೆ ನಡೆದಿದೆ.
ಅಭಿಷೇಕ್ ಹಾಗೂ ಹುಬ್ಬಳ್ಳಿಯ ಐಶ್ಬರ್ಯ ಪ್ರೀತಿಸುತ್ತಿದ್ದು, ಪ್ರೇಮವಿವಾಹ ಆಗಿದ್ದರು. ಇವರ ಮದುವೆಯೆ ಐಶ್ವರ್ಯ ಮನೆಯವರ ವಿರೋಧವಿದ್ದರೂ ಅದನ್ನು ಲೆಕ್ಕಿಸದೆ ರಿಜಿಸ್ಟರ್ಡ್ ಮ್ಯಾರೇಜ್ ಆಗಿದ್ದರು. ಒಂದು ತಿಂಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದ ಇವರು, ಜೂ. 23ರಂದು ಗದಗದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ಡ್ ಮದುವೆಯಾಗಿದ್ದರು.
ಅಭಿಷೇಕ್ ಹಾಗೂ ಐಶ್ವರ್ಯ ಜುಲೈ 14ರಂದು ಆರತಕ್ಷತೆ ಮಾಡಿಕೊಳ್ಳಲು ಯೋಜನೆ ಹಾಕಿಕೊಂಡಿದ್ದಾಗಲೇ ದೊಡ್ಡದೊಂದು ಆಘಾತ ಎದುರಾಗಿದೆ. ಇಂದು ಐಶ್ವರ್ಯ ಮನೆಯವರು ಅಭಿಷೇಕ್ ನಿವಾಸಕ್ಕೆ ಬಂದು ಆತನ ಕಣ್ಣಿಗೆ ಕಾರದಪುಡಿ ಎರಚಿ, ಐಶ್ವರ್ಯಳನ್ನು ಹೊತ್ತುಕೊಂಡು ವಾಹನದಲ್ಲಿ ತುಂಬಿಸಿಕೊಂಡು ಕರೆದೊಯ್ದಿದ್ದಾರೆ.