ಚಂಡೀಗಢ;- ರೈತರೊಬ್ಬರು ಬೆಕ್ಕಿನ ಮರಿಗಳೆಂದು ಭಾವಿಸಿ, ಚಿರತೆ ಮರಿಗಳನ್ನು ರಕ್ಷಿಸಿ ಗ್ರಾಮಕ್ಕೆ ತಂದು ಅವುಗಳಿಗೆ ಮೇಕೆ ಹಾಲನ್ನು ಕುಡಿಸಿರುವ ಘಟನೆ ಹರ್ಯಾಣ...
ಚಂಡೀಗಢ;- ರೈತರೊಬ್ಬರು ಬೆಕ್ಕಿನ ಮರಿಗಳೆಂದು ಭಾವಿಸಿ, ಚಿರತೆ ಮರಿಗಳನ್ನು ರಕ್ಷಿಸಿ ಗ್ರಾಮಕ್ಕೆ ತಂದು ಅವುಗಳಿಗೆ ಮೇಕೆ ಹಾಲನ್ನು ಕುಡಿಸಿರುವ ಘಟನೆ ಹರ್ಯಾಣದ ನುಹ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಮೇಕೆಗಳನ್ನು ಮೇಯಿಸಲೆಂದು ಕಾಡಿಗೆ ತೆರಳಿದ್ದ ವೇಳೆ 2 ಚಿರತೆ ಮರಿಗಳು ಸಿಕ್ಕಿವೆ. ಎಳೆಯದಾಗಿದ್ದ ಕಾರಣ ಅವುಗಳು ಬೆಕ್ಕಿನ ಮರಿಗಳಿರಬಹುದೆಂದು ಭಾವಿಸಿ ಅವುಗಳನ್ನು ಮನೆಗೆ ತಂದು, ಮೇಕೆ ಹಾಲು ಕುಡಿಸಿದ್ದಾರೆ. ಕೊನೆಗೆ ಈ ವಿಚಾರ ಅರಣ್ಯಾಧಿಕಾರಿಗಳಿಗೆ ಗೊತ್ತಾಗಿ, ಅವರು ಸ್ಥಳಕ್ಕಾಗಮಿಸಿ ಚಿರತೆ ಮರಿಗಳನ್ನು ಕೊಂಡೊಯ್ದಿದ್ದು, ತಾಯಿಯ ಜತೆಗೆ ಒಗ್ಗೂಡಿಸುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.
ಅರಣ್ಯಾಧಿಕಾರಿ ಪ್ರವೀಣ್ ಕಸ್ವಾನ್ ಚಿರತೆ ಮರಿಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, “ಕಾಡಿನಲ್ಲಿ ಈ ರೀತಿ ಮರಿಗಳನ್ನು ಕಂಡಾಗ ರಕ್ಷಿಸುವುದಕ್ಕಾಗಿ ಎತ್ತಿಕೊಳ್ಳಬೇಡಿ, ಸಾಧ್ಯವಾದರೆ ಅವುಗಳು ಇರುವ ಸ್ಥಳವನ್ನೇ ಸುರಕ್ಷಿತವಾಗಿಸಿ ಸಾಕು. ಇಲ್ಲದಿದ್ದರೆ ಮರಿಗಳನ್ನು ಹುಡುಕಿ ಬರುವ ತಾಯಿ, ದಿಕ್ಕು ತಪ್ಪುತ್ತದೆ. ಮರಿಗಳು ತಾಯಿಂದ ದೂರಾಗುತ್ತವೆ” ಎಂದಿದ್ದಾರೆ..