ಗ್ಯಾರಂಟಿ ಬದಿಗಿಟ್ಟು ರೈತರ ಕಷ್ಟ ನೋಡಿ ಸ್ವಾಮಿ! ಕುಡಿಯಲು ನೀರೂ ಇಲ್ಲ! ರಾಜ್ಯ ಸರ್ಕಾರದ ವಿರುದ್ಧ ಮಹಿಳೆಯರು ಗರಂ.!* ಗಡಿಯಲ್ಲಿ ಮೇವು ನೀರಿನ ಹಾಹಾಕಾರ.....
ಗ್ಯಾರಂಟಿ ಬದಿಗಿಟ್ಟು ರೈತರ ಕಷ್ಟ ನೋಡಿ ಸ್ವಾಮಿ! ಕುಡಿಯಲು ನೀರೂ ಇಲ್ಲ! ರಾಜ್ಯ ಸರ್ಕಾರದ ವಿರುದ್ಧ ಮಹಿಳೆಯರು ಗರಂ.!*
ಗಡಿಯಲ್ಲಿ ಮೇವು ನೀರಿನ ಹಾಹಾಕಾರ.. ಹಿಡಿ ಮೆವಿಗಾಗಿ ಮಹಾರಾಷ್ಟ ದತ್ತ ಮುಖ ಮಾಡಿದ ಭೂವಡೆಯರು
ಬಿತ್ತನೆ ಸಮಯಕ್ಕೆ ಮಳೆ ಕೈಕೊಟ್ಟ ಕಾರಣ ಸಂಪೂರ್ಣ ಬೆಳೆ ನಾಶವಾಗಿ ಅನ್ನದಾತರು ಕಂಗಾಲಾಗಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಖಿಳೆಗಾಂವ್, ಆಜೂರ, ಅನಂತಪುರ ಸುಮುತ್ತಲಿನ ಗ್ರಾಮದಲ್ಲಿ ನೀರು-ಮೇವಿಗಾಗಿ ಹಾಹಾಕಾರ ಭುಗಿಲೆದ್ದಿದ್ದು, ಬೆಳೆದ ಬೆಳೆಯೂ ನೀರಿಲ್ಲದೇ ಸಂಪೂರ್ಣ ನಾಶವಾಗಿದೆ.
ಮುಂಗಾರು ಹಿಂದೇಟಿನ ಕಾರಣ ಬಿತ್ತನೆ ಕಾರ್ಯಗಳೂ ಸ್ಥಗಿತವಾಗಿ, ಹಂಗಾಮು ಮುಗಿದು ರೈತರು ಮತ್ತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಬರ ಆವರಿಸಿ, ಎಲ್ಲೆಡೆ ಕುಡಿಯುವ ನೀರು, ದನಕರುಗಳಿಗೆ ಮೇವಿನ ಹಾಹಾಕಾರ ಉಂಟಾಗಿದ್ದು, ರೈತರು ಮೇವಿಗಾಗಿ ಗಡಿಯ ಮಹಾರಾಷ್ಟ್ರದತ್ತ ಮುಖಮಾಡಿದ್ದಾರೆ.
ಯಾರಿಗೆ ಬೇಕು ನಿಮ್ಮ ಬಿಟ್ಟಿ ಗ್ಯಾರಂಟಿ, ಮೊದಲು ಮೂಕ ಪ್ರಾಣಿಗಳ ಹಸಿವು ನಿಗಿಸಿ ಮಹಿಳೆ ಎಂದು ಮಹಿಳೆಯರು ಆಕ್ರೋಶಗೊಂಡಿದ್ದಾರೆ.